H R Leelavathi

H R Leelavathi

Share

22/04/2026

ಅಳುವ ಮಗುವ ಎತ್ತಿಕೊಂಡು : ರಚನೆ - ವಾಸುದೇವ ರಾವ್
ಸಂಗೀತ ಸಂಯೋಜನೆ ಮತ್ತು ಮೂಲಗಾಯನ - ಎಚ್ ಆರ್ ಲೀಲಾವತಿ

ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !

|| ಅಳುವ ಮಗುವ ಎತ್ತಿಕೊಂಡು
ಅಮ್ಮ ಹೊರಗೆ ಬಂದಳು
ಹೊಳೆವ ಚಂದಮಾಮ ತೋರಿ
ನೋಡು ನೋಡು ಎಂದಳು

ಪುಟ್ಟ ಕೈಯ್ಯ ಮೇಲೆ ಮಾಡಿ
ಬಾ ಎಂದು ಕರೆಯಿತು
ಬಿಟ್ಟ ಕಣ್ಣು ಬಿಟ್ಟ ಬಾಯಿ
ತೆರೆದು ಅಳುವ ಮರೆಯಿತು

ಆಹಾ ನೋಡಿ ಏನು ಮೋಡಿ
ಬಾನ ಚಂದಮಾಮಗೆ
ತಾನು ನಕ್ಕು ಮಗುವ ನಗಿಸಿ
ಬೆಳಗುತಿಹನು ಬೆಳ್ಳಗೆ ||

21/04/2026

ಅಳುವ ಮಗುವ ಎತ್ತಿಕೊಂಡು : ರಚನೆ - ವಾಸುದೇವ ರಾವ್
ಸಂಗೀತ ಸಂಯೋಜನೆ ಮತ್ತು ಮೂಲಗಾಯನ - ಎಚ್ ಆರ್ ಲೀಲಾವತಿ

ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !

|| ಅಳುವ ಮಗುವ ಎತ್ತಿಕೊಂಡು
ಅಮ್ಮ ಹೊರಗೆ ಬಂದಳು
ಹೊಳೆವ ಚಂದಮಾಮ ತೋರಿ
ನೋಡು ನೋಡು ಎಂದಳು

ಪುಟ್ಟ ಕೈಯ್ಯ ಮೇಲೆ ಮಾಡಿ
ಬಾ ಎಂದು ಕರೆಯಿತು
ಬಿಟ್ಟ ಕಣ್ಣು ಬಿಟ್ಟ ಬಾಯಿ
ತೆರೆದು ಅಳುವ ಮರೆಯಿತು

ಆಹಾ ನೋಡಿ ಏನು ಮೋಡಿ
ಬಾನ ಚಂದಮಾಮಗೆ
ತಾನು ನಕ್ಕು ಮಗುವ ನಗಿಸಿ
ಬೆಳಗುತಿಹನು ಬೆಳ್ಳಗೆ ||

17/04/2026

ಬಾ ನನ್ನ ಪ್ರೇಮನಿಧಿ: ರಚನೆ ಮತ್ತು ಸಂಗೀತ ಸಂಯೋಜನೆ - ಪದ್ಮಚರಣ್
ಮೂಲಗಾಯನ - ಎಚ್ ಆರ್ ಲೀಲಾವತಿ

ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !

ಬಾ ನನ್ನ ಪ್ರೇಮ ನಿಧಿ
ಬಾ ಬೇಗಬಾ
ಒಲಿದು ಬಾ ನಲಿದು ಬಾ
ಎದೆಯಾ ಬೃಂದಾವನಕೆ

ಬಾಳಗೊಂದಲದ ಕಡು
ಕರ್ಕಶತೆಯನು ಕಳೆಯೆ
ಕೊಳಲನೂದುತ ಬಾ
ಚೆಲುವ ಸೂಸುತ ಬಾ

ಹೆಪ್ಪು ಗಟ್ಟಿಹ ತಮವು
ಹೆದರಿಸುತ್ತಿರುವಾಗ
ಹುಣ್ಣಿಮೆಯ ಚಂದಿರನೆ
ನಗುನಗುತ ಬಾ

ನಡೆಗೆ ನಿಲುಕದ ನುಡಿಯು
ಬಡಬಡಿಸುತಿರುವಾಗ
ಮೌನ ತುಂಬಿದ ಮಧುರ
ಮಂದಹಾಸವೆ ಬಾ

ಒಡಕುಗಳ ತೊಡಕುಗಳ
ವಿಷ ಹರಿದು ಸುಡುವಾಗ
ಅಮರತೆಗೆ ಕೊಂಡೊಯ್ವ
ಅಮೃತ ಮೂರುತಿ ಬಾ

15/04/2026

ವರುಷ ಹೋಯಿತು: ರಚನೆ - ವಿ.ಸೀತಾರಾಮಯ್ಯ
ಸಂಗೀತ ಸಂಯೋಜನೆ - ಪದ್ಮಚರಣ್
ಗಾಯನ - ಡಾ॥ ಮಾಧವಿ ರಾಜ

ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !

ವರುಷ ಹೋಯಿತು ವರುಷ ಬಂದಿತು
ಹರುಷ ಬಾರದು ಬಾರದು
ಬಯಕೆ ಆಸೆಯೆ ಒಂದು ಫಲಿಸದು
ಎದೆಯ ವೇದನೆ ತೀರದು

ಇರುಳು ಬಂದಿತು ಇರುಳು ಹೋಯಿತು
ಮನದ ಇರುಳೇ ಕಳೆಯದು
ಇರುಳ ಕತ್ತಲೆಗಿಂತ ನಿಬಿಡವು
ಬೆಳಕು ಅರಿವಿಗೆ ಹಾಯದು

ಶಿಶಿರ ಕಳೆಯಿತು ಚೈತ್ರ ಸುಳಿಯಿತು
ಮನದ ಶಿಶಿರವು ಕಳೆಯದು
ವನವು ಹೊಸ ಹೂ ತಳಿರನಿಟ್ಟರು
ಬಾಳ್ಗೆ ಬಾರದು ಚೈತ್ರವು

Want your public figure to be the top-listed Public Figure in Mysore?
Click here to claim your Sponsored Listing.

Category

Address


Mysore