BRRLaw
Ambedkar
19/09/2024
Some Interesting Photographs from Reachlawyer Mentoring Program held at Mysore on 16.09.2024
On that day we were guided by High Court Senior Advocate B.T.Venkatesh.
Advocate Manoj, Advocate Devanand, Advocate Rangaswamy B R, Advocate Muralidhara P, Advocate Shobha, Thinker and Writer Ho.Ba. Ragothama, Lecturer Ravi, Dr. Padmashree and others participated in this program.
11/09/2024
ನಮ್ಮ ಶೈಕ್ಷಣಿಕ ಸಾಧನೆ ಇತರರನ್ನು ಅಣಕಿಸಬಾರದು; ಅನುಸರಿಸುವಂತೆ ಮಾಡಬೇಕು.
ಬಹುಪಾಲು ಜನರಿಗೆ ಭಾರತದಲ್ಲಿ ಶಿಕ್ಷಣವೆಂಬುದು ಹೊಟ್ಟೆ ಹೊರೆಯುವ ಸೀಮಿತ ಸಾಧನವಾಗಿದೆ; ಇನ್ನೂ ಕೆಲವರಿಗೆ ಪ್ರತಿಷ್ಠೆ ಮೆರೆಯುವ ಮಾನದಂಡವಾಗಿದೆ. ಆದರೆ ನೀವು ಯಾವುದೇ ವಿಶ್ವವಿದ್ಯಾಲಯದ ಧ್ಯೇಯವಾಕ್ಯವನ್ನು ಗಮನಿಸಿದರೆ ಜ್ಞಾನ ಸಂಪಾದನೆಯ ಉದ್ದೇಶವನ್ನು ಒಳಗೊಂಡಿರುತ್ತವೆ. ಉದಾಹರಣೆಗೆ ಮೈಸೂರು ವಿ.ವಿ. "ಜ್ಞಾನಕ್ಕಿಂತ ಮಿಗಿಲಾದುದಿಲ್ಲ" ಎಂದರೆ, ಬೆಂಗಳೂರು ವಿ.ವಿ. "ಜ್ಞಾನಂ ವಿಜ್ಞಾನ ಸಹಿತಂ" ಎಂದಿದೆ, ಮಂಗಳೂರು ವಿ.ವಿ."ಜ್ಞಾನವೇ ಬೆಳಕು" ಎಂದುಕೊಂಡಿದೆ, ಧಾರವಾಡ ವಿಶ್ವವಿದ್ಯಾಲಯ " ಅರಿವೇ ಗುರು"ಎಂದಿದೆ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ " ಜ್ಞಾನ ದಾಸೋಹ" ಎಂದುಕೊಂಡಿದೆ, ತುಮಕೂರು ವಿಶ್ವವಿದ್ಯಾನಿಲಯ "ಜ್ಞಾನವೇ ಅಮೃತ" ಎಂದು ಬರೆದುಕೊಂಡಿದೆ ಹೀಗೆ ಪಟ್ಟಿ ಜಗತ್ತಿನಾದ್ಯಂತ ಮುಂದುವರೆಯುತ್ತದೆ. ಬಹುಶಃ ಜಗತ್ತಿನ ಯಾವ ವಿಶ್ವವಿದ್ಯಾಲಯವೂ ಹಣ ಸಂಪಾದನೆ, ಉದ್ಯೋಗ ಸಂಪಾದನೆ, ಪ್ರತಿಷ್ಠೆ ಸಂಪಾದನೆಯೇ ನಮ್ಮ ಧ್ಯೇಯ ಎಂದು ಘೋಷಿಸಿಕೊಂಡಿಲ್ಲವೇಕೆ ?
ಜ್ಞಾನವೆಂಬುದು ಸೀಮಿತ ಉದ್ದೇಶವನ್ನು ಹೊಂದಿರದ ಕೊನೆಯನ್ನು ಕಂಡಿರದ ಮಹಾ ಸಾಗರ. ಈ ಸಾಗರದ ಉದ್ದೇಶ "ಲೋಕೋದ್ಧರಣ, ಪ್ರಜಾ ಕಲ್ಯಾಣ" ಈ ಅಂಶವನ್ನು ಅಧಿಕೃತ ಸಂಬಳಕ್ಕೆ ತನ್ನತನವನ್ನು ಮಾರಿಕೊಂಡಿರುವ ಬಹುತೇಕ (ಎಲ್ಲರೂ ಅಲ್ಲ) ಶಿಕ್ಷಕ, ಪ್ರೊಫೆಸರ್, ವಿಶ್ವವಿದ್ಯಾಲಯ ಅನುದಾನ ಆಯೋಗ(UGC), ಕರ್ನಾಟಕ ಲೋಕಸೇವಾ ಆಯೋಗ(KPSC), ಒಕ್ಕೂಟ ಸಾರ್ವಜನಿಕ ಸೇವಾ ಆಯೋಗ (UPSC) ಮುಂತಾದವರು ಇದೆಲ್ಲವನ್ನೂ ಮರೆತು ಮೆರೆಯುತ್ತಿರುವುದನ್ನು ಗಮನಿಸಿದರೆ; ಈ ದೇಶದ ಹೃದಯ ಭಾಗವೇ ಸತ್ತು ಕೊಳೆತು ನಾರುತ್ತಿದೆ ಎಂಬುದನ್ನು ಅರಿತುಕೊಳ್ಳಬಹುದು.
ಆದರೆ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಜ್ಞಾನದ ಸಂಪಾದನೆಯನ್ನು ಸಮಾಜದ ಸಬಲೀಕರಣಕ್ಕೆ ಸಂಪೂರ್ಣ ಬಳಸಿದರು. ಜ್ಞಾನಕ್ಕಿಂತ ಮಿಗಿಲಾದದ್ದು ಮಾನವೀಯತೆ ಹಾಗೂ ಅಂತಃಕರಣದ ಆಚರಣೆ ! ಜ್ಞಾನವನ್ನು ಕ್ರೂರಿ, ಕಳ್ಳ, ಸುಳ್ಳನೂ ಸಂಪಾದಿಸಬಹುದು, ಅದನ್ನು ಅವನು ಸ್ವಾರ್ಥ ಅಥವಾ ಲೋಕ ಕಂಟಕ ಉದ್ದೇಶಗಳಿಗೆ ಬಳಸುತ್ತಾನೆ ; ಆದರೆ ಬಾಬಾಸಾಹೇಬರಂತಹ ಮಹಾನ್ ಮಾನವತಾವಾದಿಗಳು ಮಾತ್ರ ಜ್ಞಾನವನ್ನು ಶೋಷಿತರ, ದುರ್ಬಲರ ಹಾಗೂ ವಂಚಿತರ ವಿಮೋಚನೆಗಾಗಿ ಬಳಸುತ್ತಾರೆ. ಅಂಬೇಡ್ಕರ್ ಅವರ ಜ್ಞಾನದ ಬಲ; ಈ ದೇಶದ ದಮನಿತ, ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಎಲ್ಲ ವರ್ಗದ ಮಹಿಳೆಯರೂ ತಮ್ಮ ಶೋಷಣೆಯನ್ನು ಅರಿಯುಂತೆ ಮಾಡಿತು. ಕಾನೂನಿನ ನೈಜ ಉದ್ದೇಶವನ್ನು ಮತ್ತು ಅದರ ಅಗತ್ಯವನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಟ್ಟಿತು.
- ಬಿ.ಆರ್.ರಂಗಸ್ವಾಮಿ, B.A., B.L., M.L
ವಕೀಲರು, ಕರ್ನಾಟಕ ಬಾರ್ ಕೌನ್ಸಿಲ್.
Click here to claim your Sponsored Listing.
Category
Contact the practice
Telephone
Website
Address
Mysore