Free Health Tips
24/06/2015
ದೇಹದ ತೂಕ ಸರಿಯಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವುದು ಹೇಗೆ?
ಈಗಿನ ಕಾಲದಲ್ಲಿ ಎಲ್ಲರೂ weight concious ಆಗಿದ್ದಾರೆ. ಕೆಲವರು ತೂಕ ಕಡಿಮೆ ಮಾಡಿಕೊಳ್ಳುವ ಬಗ್ಗೆ ಚಿಂತಿಸಿದರೆ, ಇನ್ನೂ ಕೆಲವರು ತೂಕ ಎಚ್ಚಿಸಿಕೊಳ್ಳುವ ಬಗ್ಗೆ ಚಿಂತಿಸುತ್ತಾರೆ. ಕೆಲವರಿಗಂತೂ ತಮ್ಮ ತೂಕ ಸರಿಯಾಗಿದೆಯೋ ಇಲ್ಲವೋ ಎನ್ನುವ ಅನುಮಾನ. ನನ್ನ ಸ್ನೇಹಿತನೊಬ್ಬ ಕರೆ ಮಾಡಿ ಸುಮಾರು ಅರ್ಧ ತಾಸು ಇದರ ಬಗ್ಗೆ ವಿವರಣೆ ಪಡೆದ.
ನಿಜ ಹೇಳಬೇಕೆಂದರೆ, ವೈಜ್ಞಾನಿಕವಾಗಿ ನಿಮ್ಮ ತೂಕ ಸರಿಯಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವುದು ತುಂಬಾ ಸುಲಭವಾದ ಕೆಲಸ.
ವೈದ್ಯ ಲೋಕದಲ್ಲಿ ಇದಕ್ಕೆ ನಾವು ಬಿ ಎಂ ಐ(BMI) ಎಂದು ಕರೆಯುತ್ತೇವೆ. ಇದನ್ನು ನೀವೇ ಲೆಕ್ಕ ಹಾಕಿಕೊಳ್ಳಬಹುದು.
ಹೇಗೆ?
step 01) ನಿಮ್ಮ ತೂಕ ಎಷ್ಟಿದೆ ನೋಡಿಕೊಳ್ಳಿ. ನಂತರ ನಿಮ್ಮ ಎತ್ತರ ಎಷ್ಟು ಮೀಟರ್ ಇದೆ ತಿಳಿದುಕೊಳ್ಳಿ.
step 02) ನಿಮ್ಮ ಎತ್ತರ ಎಷ್ಟಿದೆಯೋ ಅದನ್ನು ಚದರ (square) ಮಾಡಿಕೊಳ್ಳಿ.
step 03) ಈಗ ನಿಮ್ಮ ತೂಕವನ್ನು step02 ನಲ್ಲಿ ಬಂದ ಅಂಕಿಯಿಂದ ಭಾಗಿಸಿ.
ಉದಾಹರಣೆ: ನಿಮ್ಮ ತೂಕ 85 kg ಎಂದಿಟ್ಟುಕೊಳ್ಳೋಣ. ನಿಮ್ಮ ಎತ್ತರ 1.6 ಮೀಟರ್.
ನಿಮ್ಮ ಎತ್ತರದ ಚದರ: 1.6(1.6)=2.56
ಈಗ ನಿಮ್ಮ BMI=85/2.56
=33.20
ನಿಮ್ಮ BMI ಮೌಲ್ಯಎಷ್ಟಿದೆ ನೋಡಿಕೊಳ್ಳಿ.
18.5 ಕ್ಕಿಂತ ಕಡಿಮೆಯಿದ್ದರೆ : ನಿಮ್ಮ ತೂಕ ಕಡಿಮೆಯಿದೆ ಎಂದರ್ಥ
18.5 to 25 ಇದ್ದರೆ ನಿಮ್ಮ ತೂಕ ಸರಿಯಾಗಿದೆ ಎಂದರ್ಥ
25 ಕ್ಕಿಂತ ಜಾಸ್ತಿಯಿದ್ದರೆ ನಿಮ್ಮ ತೂಕ ಹೆಚ್ಚಿದೆ ಎಂದರ್ಥ.
ಇಷ್ಟೆಲ್ಲ ಮಾಡಲು ನಿಮ್ಮಲ್ಲಿ ಸಮಯ ಇಲ್ಲದಿದ್ದರೆ GOOGLE ನಲ್ಲಿ BMI CALCULATOR ಎಂದು SEARCH ಮಾಡಿ ನಿಮ್ಮ BMI ತಿಳಿದುಕೊಳ್ಳಿ
Click here to claim your Sponsored Listing.
Category
Contact the practice
Website
Address
Bangalore