Swasthya.Way2Health
We become what we consume;whether it's food Let food or thoughts. Be food be our medicine, pro-nature loving is our lifestyle.
16/04/2023
ಹೊಟ್ಟೆ ಭಾಗದ ಬೊಜ್ಜು, ಅಧಿಕ ತೂಕ
ಇಳಿಸಿಕೊಳ್ಳುವ ಸಹಜ, ಸುಲಭ ಹಾಗೂ ಸರಳ ವಿಧಾನ!
ಉಪವಾಸವಿಲ್ಲ-ಸಪ್ಲಿಮೆಂಟ್ಸ್ ಗಳಿಲ್ಲ-ಕಠಿಣ ವ್ಯಾಯಾಮವಿಲ್ಲ!
ನಿಮಗ ತಿಳಿದಿರುವಂತೆ ನಮ್ಮಲ್ಲಿ ಬಹಳಷ್ಟು ಜನ ಅಸಹಜ ರೀತಿಯಲ್ಲಿ ದಪ್ಪಗಿರುತ್ತಾರೆ, ಸಣ್ಣಗಿದ್ದವರಲ್ಲೂ ಹೊಟ್ಟೆಯ ಭಾಗ ದಪ್ಪಗಿರುತ್ತದೆ.
ಜೆನೆಟಿಕ್ ಕಾರಣದಿಂದ ಭಾರತೀಯರಲ್ಲಿ ಹೊಟ್ಟೆ ಹಾಗೂ ಮುಖದ ಭಾಗದಲ್ಲಿ, ಅಮೆರಿಕನ್ನರಲ್ಲಿ ಕುಂಡಿಯ ಭಾಗದಲ್ಲಿ ಹೆಚ್ಚಿನ ಕೊಬ್ಬು ಶೇಖರಣೆಯಾಗುತ್ತದೆ.
ಮೂಲ ಕಾರಣವಿಷ್ಟೇ, ನಮ್ಮ ಆಹಾರ ಕ್ರಮ!
ಯಾರನ್ನಾದರೂ ನೀವು ಇಂದು ಏನು ತಿಂದಿರಿ ಕೇಳಿದರೆ, ಸಾಮಾನ್ಯವಾಗಿ ಸಿಗುವ ಉತ್ತರ ಅನ್ನ-ಚಪಾತಿ, ಅನ್ನ-ಅನ್ನ ಮುದ್ದೆ ಎಂದು ಉತ್ತರ ಸಿಗುತ್ತದೆ.
ಅಂದರೆ ಸರಾಸರಿ ಒಬ್ಬ ವ್ಯಕ್ತಿ ದಿನಕ್ಕೆ 2 ಕೆಜಿ ಯಷ್ಟು ಊಟ ಮಾಡಿದರೆ ಅದರ 2/3 ಭಾಗದಷ್ಟು ಅನ್ನ, ಚಪಾತಿ ತಿನ್ನುತ್ತಾನೆ.
ಅಂದರೆ ಹೆಚ್ಚಿನ ಫ್ಯಾಟ್ ಉತ್ಪತ್ತಿ ಮಾಡುವ ಆಹಾರವನ್ನೇ ಪ್ರತಿ ದಿನ ಹೆಚ್ಚು ತಿನ್ನುತ್ತೇವೆ , ಇದೆ ಮೂಲ ಕಾರಣ.
ಹಾಗಾದರೆ ಪರಿಹಾರವೇನು?
ಮೊದಲನೇ ವಿಧಾನ:
ನೀವು ಪ್ರತೀ ದಿನ ತಿನ್ನುವ ಆಹಾರದಲ್ಲಿ ಕನಿಷ್ಟ ಅರ್ಧದಷ್ಟು ಭಾಗ ಹಣ್ಣು, ಹಸಿ ತರಕಾರಿ, ಸೊಪ್ಪು, ಮೊಳಕೆ ಕಾಳುಗಳು ಇರುವಂತೆ ನೋಡಿಕೊಳ್ಳಿ. ಸೂರ್ಯಾಸ್ಥದ ನಂತರ ಬೆಳಗಿನ ಉಪಹಾರದವರೆಗಿನ ಅಂತರವನ್ನು ಕನಿಷ್ಠ 12 ಗಂಟೆ ಇರುವಂತೆ ನೋಡಿಕೊಳ್ಳಿ ಸಾಕು. ಕೇವಲ ಒಂದು ತಿಂಗಳಲ್ಲಿ ಸುಮಾರು 10% ರಷ್ಟು ದೇಹದ ತೂಕ ಕಡಿಮೆಯಾಗುತ್ತದೆ.
ಹೊಟ್ಟೆಯ ಭಾಗದಲ್ಲಷ್ಟೇ ಅಲ್ಲಾ, ದೇಹದ ಯಾವ ಭಾಗದಲ್ಲಿ ಕೊಬ್ಬು ಹೆಚ್ಚಿದೆಯೋ ಅಲ್ಲೆಲ್ಲಾ ತನ್ನಿಂದ ತಾನೇ ಬೊಜ್ಜು ಕರಗುತ್ತದೆ.
ಎರಡನೆಯ ಪರಿಣಾಮಕಾರಿ ವಿಧಾನ ಡಿ.ಐ.ಪಿ ಡಯಟ್ (DIP):
ಮೂರು ಹಂತದ ಡಿ.ಐ.ಪಿ ಡಯಟ್ (DIP) ಅನುಸರಿಸುವುದು.
ಮೊದಲ ಹಂತ:
ನಿಮ್ಮ ದೇಹದ ತೂಕವನ್ನು ೧೦ ರಿಂದ ಗುಣಾಕಾರ ಮಾಡಿದರೆ ಬರುವ ಮೊತ್ತದ ತೂಕದಷ್ಟು ನಿಮ್ಮಿಷ್ಟದ ನಾಲ್ಕು ವಿವಿಧ ರೀತಿಯ ಹಣ್ಣುಗಳನ್ನು ಮಧ್ಯಾಹ್ನ 12 ಗಂಟೆಯ ವರಗೆ ತಿನ್ನಬೇಕು. (ಆಯಾ ಋತುಮಾನದ ಸ್ಥಳೀಯ ಹಣ್ಣುಗಳು, 60 ಕೆಜಿ ತೂಕದವರಾದರೆ 600 ಗ್ರಾಂ ನಷ್ಟು ).
ಎರಡೇ ಹಂತ:
ನಿಮ್ಮ ದೇಹದ ತೂಕವನ್ನು 5 ರಿಂದ ಗುಣಾಕಾರ ಮಾಡಿದರೆ ಬರುವ ಮೊತ್ತದ ತೂಕದಷ್ಟು ( 60 ಕೆಜಿ ತೂಕದವರು 300 ಗ್ರಾಂ ನಷ್ಟು) ನಾಲ್ಕು ರೀತಿಯ ಯಾವುದಾದರೂ ಹಸಿ ತರಕಾರಿಗಳನ್ನು ತಿನ್ನ ಬೇಕು, ನಂತರ ನಿಮ್ಮಿಷ್ಟದ ಏನನ್ನಾದರೂ ತಿನ್ನಬಹುದು.
ನೆನಪಿರಲಿ ಹಸಿ ತರಕಾರಿಗಳನ್ನು ತಿಂದ ನಂತರವೇ ನಿಮ್ಮಿಷ್ಟದ ಊಟ!
ರಾತ್ರಿಯ ಊಟಕ್ಕೂ ಇದೇ ವಿಧಾನ ಅನುಸರಿಸಿ. ಹಸಿ ತರಕಾರಿಗಳು+ನಿಮ್ಮಿಷ್ಟದ ಊಟ. ಗರಿಷ್ಠ 8 ಗಂಟೆಯ ಒಳಗೆ ತಿನ್ನ ಬೇಕು.
ಸಮಯ ಮೀರಿದರೆ ಯಾವ ಆಹಾರವೂ ಬೇಡ!
ಮೂರನೇ ಹಂತ: ಪ್ರಾಣಿಜನ್ಯ ಆಹಾರ ಪದಾರ್ಥಗಳನ್ನು ವರ್ಜಿಸುವುದು.
ಅಂದರೆ, ಮಾಂಸಾಹಾರ, ಮೊಟ್ಟೆ, ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ ಯಾವುದೂ ಬೇಡ. ಹಾಗೆಯೇ ಫ್ಯಾಕ್ಟರಿ, ಬೇಕರಿ ಪದಾರ್ಥಗಳನ್ನು ಈ ಡಯಟ್ ಸಮಯದಲ್ಲಿ ಬಿಟ್ಟು ಬಿಡುವುದು.
ಗಮನಿಸಿ. ಇಲ್ಲಿ ಸೂಚಿಸಿರುವಂತೆ ನಿಮ್ಮ ದೇಹದ ತೂಕಕ್ಕೆ ಅನುಗುಣವಾಗಿ ಸಿಪ್ಪೆ ತೆಗೆದ ಮೇಲೆ ಅಷ್ಟೇ ಪ್ರಮಾಣದಲ್ಲಿ ಅಥವಾ ಅದಕ್ಕೂ ಅಧಿಕ ಪ್ರಮಾಣದಲ್ಲಿ ಹಣ್ಣು- ತರಕಾರಿಗಳನ್ನು ತಿಂದರೆ ಅದು ನಿಮಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಸರಿಯಾದ ಪ್ರಮಾಣಕ್ಕಿಂತ ಕಡಿಮೆ ತಿಂದರೆ ಅದು ಕೇವಲ ಆಹಾರವಾಗುತ್ತದೆ.
ಈ ಡಿ.ಐ.ಪಿ ಡಯಟ್ ಮೂರು ಮೂರು ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನದ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ.
(ಸಸ್ಯಾಹಾರ-ಮಾಂಸಾಹಾರ ಆಹಾರ ಕ್ರಮದ ಮೇಲೆ ಅಲ್ಲ!)
ಒಂದು ತಿಂಗಳ ಕಾಲ ಶಿಸ್ತು ಬದ್ದವಾಗಿ ಈ ಡಿ.ಐ.ಪಿ ಡಯಟ್ ಅನ್ನು ಪಾಲಿಸಿದರೆ, ಸುಮಾರು 10% ರಷ್ಟು ದೇಹದ ತೂಕ ಕಡಿಮೆಯಾಗುತ್ತದೆ. ಮೂಳೆ-ಮಾಂಸಖಂಡಗಳಿಗೆ ಧಕ್ಕೆಯಾಗದಂತೆ ದೇಹದ ಹೊಟ್ಟೆಯ ಭಾಗದಲ್ಲಷ್ಟೇ ಅಲ್ಲದೆ ಎಲ್ಲೆಲ್ಲಿ ಹೆಚ್ಚಿನ ಕೊಬ್ಬಿದೆಯೋ ಆಯಾ ಭಾಗದಲ್ಲಿ ಮಾತ್ರ ಕೊಬ್ಬು, ಹೆಚ್ಚಿನ ನೀರಿನ ಅಂಶ ಕರಗಿ ನಿಮ್ಮ ಎತ್ತರಕ್ಕೆ ಅನುಗುಣವಾಗಿ ದೇಹದ ತೂಕ ಕಡಿಮೆಯಾಗುತ್ತದೆ.
ಜೊತೆಗೆ ಬಹಳ ಚೈತನ್ಯವೂ ಇರುತ್ತದೆ, ಮುಖದ ಕಾಂತಿಯೂ ಹೆಚ್ಚುತ್ತದೆ.
ಬಹಳ ಮುಖ್ಯವಾಗಿ ತಪ್ಪಾದ ಜೀವನ ಶೈಲಿಯಿಂದ ಬರುವ ಖಾಯಿಲೆಗಳಾದ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಹೃದಯ, ಚರ್ಮ ಸಂಬಂಧಿ ತೊಂದರೆಗಳು, ಖಾಯಿಲೆಗಳು, ಅಜೀರ್ಣ, ಮಲಬದ್ಧತೆ, ಇತ್ಯಾದಿ ಖಾಯಿಲೆಗಳ ವಿಷಯದಲ್ಲಿ ಕೇವಲ ಒಂದು ವಾರದಲ್ಲಿ ಈ ಡಿ.ಐ.ಪಿ ಡಯಟ್ ಅನುಸರಿಸುವ ಮೂಲಕ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸ್ವಾಭಾವಿಕವಾಗಿ ಪ್ರಗತಿ ಕಾಣಬಹುದು.
(ಡಿ.ಐ.ಪಿ ಡಯಟ್ ನ ಸಂಪೂರ್ಣ ವಿವರವನ್ನು ನನ್ನ ಹಿಂದಿನ ಲೇಖನದಲ್ಲಿ ತಿಳಿಸಲಾಗಿದೆ.)
ಇನ್ನೂ ಶೀಘ್ರದಲ್ಲಿ ಫಲಿತಾಂಶ ಪಡೆಯಲು ಅತ್ಯಂತ ಪರಿಣಾಮಕಾರಿ ಮೂರನೇ ವಿಧಾನವಿದೆ.
ಅದು ಹಾಟ್ ವಾಟರ್ ಇಮ್ಮರ್ಶನ್ ಥೆರಫಿ.
ಬಾತ್ ಟಬ್ ನಿಮಗೆ ಗೊತ್ತಿದೆ ಅಲ್ಲವೇ?
ಬಾತ್ ಟಬ್ ತುಂಬಾ ನೀರು ತುಂಬಿಸಿ. 42 ಡಿಗ್ರಿ ಸೆಲ್ಸಿಯಸ್ ನಷ್ಟು ನೀರನ್ನು ಬಿಸಿ ಮಾಡಿ. ಒಂದೇ ಬಾರಿಗೆ ಸುಮಾರು ಎರಡು ಗಂಟೆಯಷ್ಟು ಸಮಯ ಅಥವಾ ಬೆಳಿಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆಯಷ್ಟು ಸಮಯ ಕುತ್ತಿಗೆಯ ಮಟ್ಟಕ್ಕೆ ದೇಹವನ್ನು ಸಂಪೂರ್ಣ ಮುಳುಗಿಸಿ ಕಾಲು ನೀಡಿ ಕುಳಿತುಕೊಳ್ಳುವುದನ್ನು ಸುಮಾರು ಒಂದು ತಿಂಗಳು ಅಭ್ಯಾಸ ಮಾಡಿದರೆ, ನೀವು ಆಶ್ಚರ್ಯ ಪಡುವಷ್ಟು ರೀತಿಯಲ್ಲಿ ಬೊಜ್ಜು ಕರಗುವುದರ ಜೊತೆಗೆ ಗಣನೀಯವಾಗಿ ದೇಹದ ತೂಕ ಕಡಿಮೆಯಾಗುತ್ತದೆ. ಎಷ್ಟು ಎಂದರೆ ದಿನಕ್ಕೆ ಸುಮಾರು 500 ಗ್ರಾಂ ನಿಂದ ಅತೀ ತೂಕದವರಿಗೆ 1 ಕೆಜಿ ವರೆಗೆ ಕಡಿಮೆಯಾಗುತ್ತದೆ!
ದೇಹದ ಅನಗತ್ಯ ನೀರಿನಂಶ, ಟ್ಯೂಮರ್, ಸ್ಟೋನ್ ಕರಗುತ್ತದೆ.
ಕಿಡ್ನಿ ಯಲ್ಲಿನ ಹೆಚ್ಚಿನ ಕ್ರೆಟಿನೈನ್, ಕೊಲೆಸ್ಟ್ರಾಲ್, ಯೂರಿಯ, ಪೊಟ್ಯಾಷಿಯಂ, ಸೋಡಿಯಂ, ಯೂರಿಕ್ ಆಸಿಡ್, ಶುಗರ್, ಹೆಚ್ಚಿನ ಫ್ಯಾಟ್ ಎಲ್ಲವೂ ಬೆವರು ಹಾಗೂ ಮೂತ್ರದ ರೂಪದಲ್ಲಿ ದೇಹವು ಸ್ವಾಭಾವಿಕ ರೂಪದಲ್ಲಿ ಹೊರಹಾಕುತ್ತದೆ. ಡಯಾಲಿಸಿಸ್ ಹಂತ ತಲುಪಿದವರಿಗೆ ಕಿಡ್ನಿ ಸಮಸ್ಯೆಯಿಂದ ಮುಕ್ತಿ ಹೊಂದಲು ಇದೊಂದು ಪರಿಣಾಮಕಾರಿ ಅಸ್ತ್ರ.
(ಮೇಲಿನ ಮೂರು ವಿಧಾನಗಳಿಗೂ ವಿಜ್ಞಾನದ ಅಡಿಪಾಯವಿದೆ, ಲಕ್ಷಾಂತರ ಗುಣಮುಖರಾದ ಉದಾಹರಣೆಗಳಿವೆ, ಆಯುಷ್ ಇಲಾಖೆ ಡಿ.ಐ.ಪಿ ಡಯಟ್ ಯನ್ನು ಸತತ ಎರಡು ವರ್ಷ ಗಮನಿಸಿ, ಅದರ ಪಲಿತಾಂಶಗಳನ್ನು ಕೂಲಂಕುಷವಾಗಿ ಗಮನಿಸಿ ಅಧಿಕೃತವಾಗಿ ಮಾನ್ಯ ಮಾಡಿದೆ.)
ಧನ್ಯವಾದಗಳು
ಕಾರಂಜಿ ಶ್ರೀಧರ್
Email: [email protected]
13/03/2023
ನಿಮಗೆ ಹೃದಯಾಘಾತ ಆಗತ್ತದೆ ಎಂಬುದನ್ನು ಮೊದಲೇ ಕಂಡುಕೊಳ್ಳುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಒಂದು ವಿದ್ಯಮಾನಾ ನಿಮ್ಮ ಗಮನಕ್ಕೆ ಬಂದಿರಬಹುದು.
ಕೆಲಸ ಮಾಡುತ್ತಿರುವಾಗ, ವ್ಯಾಯಾಮ ಮಾಡುತ್ತಿರುವಾಗ, ನಡೆಯುತ್ತಿರುವಾಗ, ಡ್ರೈವ್ ಮಾಡುತ್ತಿರುವಾಗ, ಡಾನ್ಸ್ ಮಾಡುತ್ತಿರುವಾಗ, ನಗು ನಗುತ್ತಾ ಮಾತನಾಡುತ್ತಿರುವಾಗ ಅಥವಾ ಇನ್ನಾವುದೇ ಕೆಲಸ ಮಾಡುತ್ತಿರುವಾಗ ಅಚಾನಕ್ಕಾಗಿ ಕುಸಿದುಬಿದ್ದು ಪ್ರಾಣ ಕಳೆದುಕೊಳ್ಳುವ ದೃಶ್ಯಗಳನ್ನು ನೀವು ಗಮನಿಸಿರುತ್ತೀರಿ. ಇವರಲ್ಲಿ ಯಾವುದೇ ಮೆಡಿಕಲ್ ಹಿಸ್ಟರಿ ಇಲ್ಲದೇ ಇರದ, ಆರೋಗ್ಯದಿಂದ ಇದ್ದವರೂ ಇದ್ದಾರೆ.
ಇದರ ಹಿಂದಿನ ಕಾರಣವನ್ನು ಇಲ್ಲಿ ಸಾರ್ವಜನಿಕವಾಗಿ ನಾನು ಚರ್ಚಿಸುವಂತಿಲ್ಲ.
ಆದರೆ, ಯಾವ ಕಾರಣದಿಂದ ಇದು ಆಗುತ್ತಿದೆ ಎಂದು ತಿಳಿದುಕೊಳ್ಳುವುದಕ್ಕಿಂತ ಏಕೆ ಹೀಗಾಗುತ್ತಿದೆ ಅನ್ನುವುದರ ವೈಜ್ಞಾನಿಕ ಕಾರಣದ ಬಗ್ಗೆ ತಿಳಿಯೋಣ.
ಇದಕ್ಕೆ ಮೂಲ ಕಾರಣ ನಮ್ಮ 'ಸರ್ಕ್ಯಾಡಿಯನ್ ರಿದಮ್' ಅಥವಾ ಬಾಡಿ ಕ್ಲಾಕ್ ನಲ್ಲಿ ಅಡಚಣೆಯುಂಟಾಗುವುದು.
ಅಂದರೆ ನಮ್ಮ ದೇಹದ ಆರೋಗ್ಯ ಕಾಪಾಡುವುದರಲ್ಲಿ ಅಥವಾ ಬಿಗಡಾಯಿಸುವುದರಲ್ಲಿ ಈ 'ಬಾಡಿ ಕ್ಲಾಕ್' ಮಹತ್ವದ ಪಾತ್ರ ವಹಿಸುತ್ತದೆ.
ನಮ್ಮ ಬಾಡಿ ಕ್ಲಾಕ್ ಒಂದು ಲಯದಲ್ಲಿದ್ದರೆ ಆರೋಗ್ಯವಾಗಿರುತ್ತೇವೆ, ಸಮತೋಲನ ತಪ್ಪಿದರೆ ಅರೋಗ್ಯ ಬಿಗಡಾಯಿಸುತ್ತದೆ.
ಒಂದು ಉದಾಹರಣೆಯನ್ನು ಗಮನಿಸೋಣ.
ನಿಮ್ಮ ಕಾರಿನ ನಾಲ್ಕು ಚಕ್ರಗಳಲ್ಲಿ ಒಂದು ಚಕ್ರ ಹೊಸದು, ಉಳಿದ ಮೂರು ಸ್ವಲ್ಪ ಸವೆದಿರುವ ಚಕ್ರಗಳು.
ಈ ಸ್ಥಿತಿಯಲ್ಲಿ ಕಾರನ್ನು ಸತತ ಬಳಕೆ ಮಾಡುತ್ತಿದ್ದರೆ ಏನಾಗುತ್ತದೆ?
ಕಾಲ ಕ್ರಮೇಣ ಸಮತೋಲನವಿಲ್ಲದೆ ಉಪಯೋಗಿಸುವ ಪರಿಣಾಮದಿಂದ ಬ್ರೇಕ್, ಸಸ್ಪೆನ್ಷನ್, ಕ್ಲಚ್, ಎಂಜಿನ್ ಹಾಗೂ ಕಾರಿನ ಇತರ ಭಾಗಗಳೂ ಕೆಟ್ಟು ನಿಲ್ಲುವ ಸಂಭವ ಹೆಚ್ಚು ಅಲ್ಲವೇ?
ಕಾರಿಗೆ ಒಂದು ಲಯವಿರಬೇಕಾದರೆ ಒಂದೋ ನಾಲ್ಕೂ ಟೈರ್ ಗಳು ಸಮನಾಗಿ ಸವೆದಿರಬೇಕು, ಅಥವಾ ನಾಲ್ಕೂ ಟೈರ್ ಗಳು ಹೊಸದಾಗಿರವೇಕು, ಅಲ್ಲವೇ?
ನಮ್ಮ ದೇಹದ ಈ ರೀತಿಯ ಲಯದ ಸ್ಥಿತಿ ಹಾಗೂ ಲಯ ಬಿಗಡಾಯಿಸುವ ರೀತಿಯನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ 'ಬಾಡಿ ಕ್ಲಾಕ್' ಅಂದರೆ ಏನು ಎಂಬುದನ್ನು ಅರ್ಥ ಮಾಡಿಕೊಂಡು, ಬಿಗಡಾಯಿಸಿದ 'ಬಾಡಿ ಕ್ಲಾಕ್' ಅನ್ನು ಸಮತೋಲನದ ಸ್ಥಿತಿಗೆ ತಂದುಕೊಳ್ಳುವ ವಿಧಾನವನ್ನು ತಿಳಿಯಲು ಸಹಾಯವಾಗುತ್ತದೆ.
'ಸರ್ಕ್ಯಾಡಿಯನ್ ರಿದಮ್' ಅಥವಾ 'ಬಾಡಿ ಕ್ಲಾಕ್' ಎಂಬುದು 2017 ರ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನ.
ಈ ವಿಜ್ಞಾನ ಹೇಳುವಂತೆ ನಮ್ಮ 'ಬಾಡಿ ಕ್ಲಾಕ್' ಅನ್ನು ಸಮತೋಲನದಲ್ಲಿ ಇಟ್ಟುಕೊಂಡರೆ ನಾವು ಆರೋಗ್ಯದಿಂದಿರುತ್ತೇವೆ, ಸಮತೋಲನ ತಪ್ಪಿದರೆ ಆರೋಗ್ಯ ಬಿಗಡಾಯಿಸುತ್ತದೆ.
ಈ 'ಸರ್ಕ್ಯಾಡಿಯನ್ ರಿದಮ್' ಆಫ್ ಬ್ಲಡ್ ಪ್ರೆಷರ್' ವಿಜ್ಞಾನದ ವಿಶ್ಲೇಷಣೆಯ ಪ್ರಕಾರ, ದಿನದಲ್ಲಿ ನಮ್ಮ ರಕ್ತದೊತ್ತಡ ಹೇಗಿರುತ್ತದೆ ಎಂಬುದನ್ನು ಅರಿಯುವ ಮೂಲಕ ಮುಂದಿನ ಕೆಲವು ದಿನಗಳಲ್ಲಿ ನಮಗೆ ದೃದಯಾಘಾತ ಆಗಬಹುದೇ ಎಂಬುದನ್ನು ಅಂದಾಜಿಸಬಹುದು!
(ಹೃದಯಾಘಾತ ಆಗೇ ಆಗುತ್ತದೆ ಎಂದಲ್ಲ, ಸಾಧ್ಯತೆಗಳು ಹೆಚ್ಚು ಎಂದು ಹೇಳಬಹುದು)
ಅಂದರೆ, ಬೆಳಿಗ್ಗೆ ಸುಮಾರು 10 ಗಂಟೆ ನಿಮ್ಮ ರಕ್ತದೊತ್ತಡ 140/90 ಇದೆಯೆಂದುಕೊಂಡರೆ, ರಾತ್ರಿ 10 ಗಂಟೆಯ ಸುಮಾರಿಗೆ ರಕ್ತದೊತ್ತಡ 120/80 ಇದೆ ಅಂದುಕೊಳ್ಳೋಣ. ಅಂದರೆ ಬೆಳಿಗ್ಗಿನ ರಕ್ತದೊತ್ತಡಕ್ಕೆ ಹೋಲಿಸಿದರೆ ರಾತ್ರಿಯ ರಕ್ತದೊತ್ತಡ ಸುಮಾರು 10%-20% ಕಡಿಮೆಯಿದೆ ಅಲ್ಲವೇ?.
ಹೀಗೆ ಬೆಳಿಗ್ಗೆ, ಮಧ್ಯಾಹ್ನ ರಾತ್ರಿ ರಕ್ತದೊತ್ತಡ ಒಂದೇ ರೀತಿಯಿರದೆ ಒಂದು ಲಯದಲ್ಲಿ ವ್ಯತ್ಯಾಸವಾಗುತ್ತಿದ್ದರೆ ಅಂತಹ ಜನರನ್ನು 'ಡಿಪ್ಪರ್' ವರ್ಗದವರು ಎಂದು ವರ್ಗೀಕರಿಸಲಾಗುತ್ತದೆ.
ಯಾರ ತಕ್ತದೊತ್ತಡ ಬೆಳಿಗ್ಗೆ ಮಧ್ಯಾಹ್ನ, ರಾತ್ರಿ ಒಂದೇ ರೀತಿ ಇರುವುದಿಲ್ಲ, ಅಂದರೆ ಬೆಳಿಗ್ಗೆ ರಕ್ತದೊತ್ತಡ 140/90 ರಷ್ಟು ಇದ್ದು, ರಾತ್ರಿಯೂ ಅಷ್ಟೇ ಇದ್ದರೆ ಆ ರೀತಿಯ ಜನರನ್ನು 'ನಾನ್ ಡಿಪ್ಪರ್' ವರ್ಗದವರು ಎಂದು ವರ್ಗೀಕರಿಸಲಾಗುತ್ತದೆ.
ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ರಕ್ತದೊತ್ತಡ ಬೆಳಿಗ್ಗೆ 9-10 ಸುಮಾರಿಗೆ ಹೆಚ್ಚಿರುತ್ತದೆ, ರಾತ್ರಿಯ ಹೊತ್ತಿಗೆ ಕಡಿಮೆಯಿರುತ್ತದೆ.
ನಡುವೆ ಲಯಬದ್ಧವಾದ ಏರುಪೇರು ಆಗತ್ತಿರುತ್ತದೆ. ಆದರೆ ಯಾವ ವ್ಯಕ್ತಿಯ ರಕ್ತದೊತ್ತಡ ಬೆಳಿಗ್ಗೆಯಿಂದ ರಾತ್ರಿಯವರೆಗೆ ಒಂದೇ ರೀತಿಯಿರುತ್ತದೆಯೋ ಅದು ಒಳ್ಳೆಯ ಆರೋಗ್ಯದ ಲಕ್ಷಣವಲ್ಲ!
ಅಂದರೆ, ಮುಂದಿನ ಕೆಲವುದು ದಿನಗಳಲ್ಲಿ ಅಂಥವರಲ್ಲಿ ದೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂಬುದನ್ನು ಊಹಿಸಬಹುದು!
ಸತತ ಮೂರು ದಿನಗಳ ರಕ್ತದೊತ್ತಡದ ರೀಡಿಂಗ್ ಅನ್ನು ನಿಗವಾಹಿಸಿ ನೋಡಿಕೊಂಡು ನೀವು 'ಡಿಪ್ಪರ್' ವರ್ಗದವರೋ ಅಥವಾ 'ನಾನ್ ಡಿಪ್ಪರ್' ವರ್ಗದವರೋ ಎಂದು ತಿಳಿದುಕೊಳ್ಳಬಹುದು.
ಒಂದು ವೇಳೆ ನೀವು 'ನಾನ್ ಡಿಪ್ಪರ್' ವರ್ಗದವರಾಗಿದ್ದರೆ ನಿಮ್ಮ 'ಬಾಡಿ ಕ್ಲಾಕ್' ಅನ್ನು ಸರಿಪಡಿಸಿಕೊಳ್ಳುವ ಮೂಲಕ ಹೃದಯಾಗಾತದ ಸಾಧ್ಯತೆಯಿಂದ ಪಾರಾಗಬಹುದು.
ಬಾಡಿ ಕ್ಲಾಕ್ ಅನ್ನು ಸರಿಪಡಿಸಿಕೊಳ್ಳುವ ಮಾರ್ಗೋಪಾಯಗಳನ್ನು ಇಲ್ಲಿ ಗಮನಿಸೋಣ.
ಮೊದಲನೆಯದು ಸಮಯವೇ ಔಷಧಿ (Time as Medicine):
ನೀವು ಪ್ರತೀ ದಿನ ತಿನ್ನುವ ಆಹಾರವನ್ನು ೮ ಗಂಟೆಗಳ ಅವಧಿಯೊಳಗೇ ತಿನ್ನಿ.
ನೀವು ಸಸ್ಯಾಹಾರಿ ಅಥವಾ ಮಾಂಸಾಹಾರಿ ಏನೇ ಆಗಿರಿ, ಬೆಳಿಗ್ಗಿನ 8 ಗಂಟೆಗಳ ಅವಧಿಯೊಳಗೆ ಆಹಾರ ತಿನ್ನಿ, ಉಳಿದ 16 ಗಂಟೆ ಹೊಟ್ಟೆಯನ್ನು ಖಾಲಿ ಬಿಡಿ. ಬಾಯಾರಿಕೆಯಾದರೆ ನೀರನ್ನು ಸೇವಿಸಬಹುದು.
ಬೆಳಿಗ್ಗೆ 10 ಗಂಟೆ ಉಪಹಾರ ಸೇವಿಸಿದರೆ ಕೊನೆಯ ಊಟದ ಸೇವನೆ 6 ಗಂಟೆಯ ಒಳಗೆ ಮುಗಿಸಬೇಕು.
6 ಗಂಟೆಯ ನಂತರ ಬೆಳಿಗ್ಗೆ 10 ಗಂಟೆಯ ವರೆಗೆ ಖಾಲಿ ಹೊಟ್ಟೆಯಲ್ಲಿರಬೇಕು.
ರೀತಿ ಮುಂದಿನ 15 ದಿನಗಳ ವರೆಗೆ ಮಾಡಿದರೆ ನೀವು ಊಹಿಸದ ಒಂದಷ್ಟು ಆರೋಗ್ಯ ಸುಧಾರಣೆಗಳು ಆಗುತ್ತತೆ!
ರಕ್ತದೊತ್ತಡ ಕಡಿಮೆಯಾಗುವುದಷ್ಟೇ ಅಲ್ಲ, ಡಯಾಬಿಟಿಕ್ ಇದ್ದವರಿಗೆ ಡಯಾಬಿಟೀಸ್ ಕಡಿಮೆಯಾಗುತ್ತದೆ.
ಉರಿಯೂತ ಕಡಿಮೆಯಾಗುತ್ತದೆ. ಅತಿಯಾದ ದೇಹದ ತೂಕ ಕಡಿಮೆಯಾಗಿರುತ್ತದೆ, ನಿದ್ರಾಹೀನತೆಯಿಂದ ಬಳಲುತ್ತಿದ್ದವರಿಗೆ ನೆಮ್ಮದಿಯ ನಿದ್ರೆ ಬರಲು ಪ್ರಾರಂಭವಾಗಿರುತ್ತದೆ. ಅಜೀರ್ಣ, ಕಿಡ್ನಿ, ಥೈರೊಯ್ಡ್ ಸಮಸ್ಯೆಯಿದ್ದವರಿಗೆ ಸಾಕಷ್ಟು ಸುಧಾರಣೆ ಕಂಡುಬರುತ್ತದೆ.
ಈ ರೀತಿ ಇನ್ನೂ ಅನೇಕ ಲಾಭಗಳು ಈ 'ಸಮಯವೇ ಮದ್ದು' ಪದ್ದತಿಯಿಂದ ಸಿಗುತ್ತವೆ.
15 ದಿನಗಳವರೆಗೆ ಈ ರೀತಿ 8 ಗಂಟೆಯ ಒಳಗೆ ಆಹಾರವನ್ನು ತಿಂದು ಉಳಿದ 16 ಗಂಟೆಯವರಿಗೆ ಖಾಲಿ ಹೊಟ್ಟೆಯಲ್ಲಿದ್ದು,
ಮುಂದಿನ 15 ದಿನಗಳು ದಿನದ 10 ಗಂಟೆಯ ಅವಧಿಯಲ್ಲಿ ತಿಂದು ಉಳಿದ 14 ಗಂಟೆ ಖಾಲಿ ಹೊಟ್ಟೆಯಲ್ಲಿರುವುದನ್ನು ರೂಢಿಸಿಕೊಂಡು ಅಲ್ಲಿಂದ ಮುಂದೆಕ್ಕೆ ಜೀವನ ಪರ್ಯಂತ ಬೆಳಿಗ್ಗಿನ 12 ಗಂಟೆಯ ಅವಧಿಯಲ್ಲಿ ಮಾತ್ರ ಆಹಾರ ಸೇವನೆ ಮಾಡಿ ಉಳಿದ 12 ಗಂಟೆ ಏನೂ ತಿನ್ನದೆ ಇರುವ ಶಿಸ್ತನ್ನು ಬೆಳಸಿಕೊಂಡರೆ ಸದಾಕಾಲ ನಿರೋಗಿಗಳಾಗಿ ಬದುಕಬಹುದು.
ಏನು ತಿನ್ನಬೇಕು ಎಂದು ಲೆಕ್ಕ ಹಾಕಿ ತಿನ್ನುವುದುದಕ್ಕಿಂತ ಸೂರ್ಯ ಮುಳುಗಿದ ಮೇಲೆ ಏನೂ ತಿನ್ನದಿರುವುದೇ ಆರೋಗ್ಯದ ಗುಟ್ಟು!
(ಈ ಪರಿಕಲ್ಪನೆಯನ್ನು 'ಆಟೋಫೆಜಿ' ಎಂದು ಕರೆಯುತ್ತಾರೆ. ಮುಂದೊಂದು ದಿನ ಈ ಕುರಿತು ಪ್ರತ್ಯೇಕವಾಗಿ ವಿವರಿಸುತ್ತೇನೆ.)
ಇದರ ಜೊತೆಗೆ, ಪ್ರತಿ ದಿನ ಬೆಳಿಗ್ಗೆ ಬರಿಗಾಲಲ್ಲಿ ಮಣ್ಣಿನ ಸಂಪರ್ಕದಲ್ಲಿದ್ದು ಕನಿಷ್ಠ 30 ನಿಮಿಷ ಸೂರ್ಯ ಸ್ನಾನ ಮಾಡುವುದರ ಜೊತೆಗೆ ರಾತ್ರಿ ಸಮಯದಲ್ಲಿ ಮೊಬೈಲ್ ಬಳಸುವುದನ್ನು ನಿಲ್ಲಿಸಿ, ಪ್ರಖರ ಬೆಳಕಿನ ಲೈಟ್ ಗಳನ್ನು ಬಳಸದೆ ಕೇವಲ ಎಣ್ಣೆ ದೀಪಗಳು ಅಥವಾ ಮೇಣದ ಬತ್ತಿ ದೀಪಗಳನ್ನು ಬಳಸಲು ರೂಢಿಸಿಕೊಂಡರೆ ಹೆಚ್ಚಿನ ಸುಧಾರಣೆ ಕಂಡು ಬರುತ್ತದೆ. ಕ್ರಮೇಣ ಗುಣಮುಖರೂ ಆಗುತ್ತೀರಿ.
ಈ ರೀತಿಯ ಚಿಕಿತ್ಸಕ ಗುಣ ಪದ್ದತಿಯನ್ನು ಬೆಳಕೇ ಮದ್ದು.
(Light as Medicine) ಎಂದು ಕರೆಯುತ್ತಾರೆ.
ದೀರ್ಘಕಾಲದಿಂದ ಔಷಧಿ, ಮಾತ್ರೆಗಳು, ಇಂಜೆಕ್ಷನ್ ನ ಮೊರೆ ಹೋದವರಲ್ಲಿ ಈ ಸುಧಾರಣೆಯಲ್ಲಿ ನಿಧಾನವಾಗಬಹುದು. ಅಂಥವರಿಗೆ ಹಾಟ್ ವಾಟರ್ ಇಮ್ಮರ್ಶನ್ ಥೆರಪಿ (Hot Immersion Therapy), ಜೀರೋ ವೋಲ್ಟ್ ಥೆರಪಿ(Zero Volt Therapy), ಲಿವಿಂಗ್ ವಾಟರ್ ಥೆರಪಿ (Living Water Therapy), ಡಿ.ಇ. ಪಿ. ಡಯಟ್(DIP DIET) ಹಾಗೂ ಪಂಚಕರ್ಮ ರೀತಿಯ ಔಷಧಿ ರಹಿತ ಚಿಕಿತ್ಸಾ ಪದ್ದತಿಯಿಂದ ಗುಣಪಡಿಸುವ ಕ್ರಮವಿದೆ.
ಈ ರೀತಿಯ ಚಿಕಿತ್ಸೆಗಳಿಂದ ಡಯಾಬಿಟಿಸ್, ಬಿ.ಪಿ., ಹೃದಯ ಸಂಬಂಧಿ ಖಾಯಿಲೆ ಇರುವವರು, ಕೀಲು ನೋವು, ದೇಹದ ನೋವು, ಅತಿಯಾದ ದೇಹದ ತೂಕ, ಉರಿಯೂತ, ಮಲಬದ್ಧತೆ, ಕಡಿಮೆ ಇಮ್ಮ್ಯೂನಿಟಿ ಇರುವವರು, ಪಾರ್ಕಿನ್ಸನ್ ಖಾಯಿಲೆ ಇರುವವರು ಬೇಗ ಗುಣಮುಖರಾಗಬಹುದು.
ಈಗ ಹೃದಯಾಘಾತದ ಸಾಧ್ಯತೆಯ ಹಾಗೂ ಗುಣಪಡಿಸಿಕೊಳ್ಳುವ ಕುರಿತು ನಿಮಗೆ ಒಂದಿಷ್ಟು ಅರಿವು ಮೂಡಿರಬಹುದು.
ಈಗ ಹೇಳಿ, ನೀವು ಡಿಪ್ಪರ್ ವರ್ಗದವರೇ? ಅಥವಾ ನಾನ್ ಡಿಪ್ಪರ್ ವರ್ಗದವರೇ?
ಮೂಲ: ಡಾ.ಬಿಸ್ವರೂಪ್ ರಾಯ್ ಚೌಧುರಿ
ಅನುವಾದ: ಕಾರಂಜಿ ಶ್ರೀಧರ್
Email: [email protected]
09/11/2022
'ಡಯಾಬಿಟಿಸ್'ನಿಂದ ಮುಕ್ತಿ ಹೊಂದುವುದು ಈಗ ಸರಳ-ಸುಲಭ ಮತ್ತು ಸಾಧ್ಯ!
ಒಂದು ಬಾರಿ ಬಿಪಿ-ಶುಗರ್ ಬಂದರೆ ಜೀವನ ಪರ್ಯಂತ ಮಾತ್ರೆ-ಇಂಜೆಕ್ಷನ್ ತೆಗೆದುಕೊಂಡೆ ಬದುಕಬೇಕೆಂಬ ಭ್ರಮೆಯಿತ್ತು!
ಇಂದು ಆಯುರ್ವೇದ, ನೈಸರ್ಗಿಕ ಚಿಕಿತ್ಸೆ ವೈದ್ಯರಷ್ಟೇ ಅಲ್ಲದೆ ಎಲ್ಲ ರೀತಿಯ ವೈದ್ಯ ಪದ್ಧತಿಯ ತಜ್ಞರೂ ಕೂಡ ಡಯಾಬಿಟಿಸ್ ನಿಂದ ಶಾಶ್ವತವಾಗಿ ಮುಕ್ತಿ ಹೊಂದಬಹುದು ಎಂಬುದನ್ನು ಈಗ ಕಂಡುಕೊಂಡಿದ್ದಾರೆ!
2 ನೋಬಲ್ ಪ್ರಶಸ್ತಿ ಪುರಸ್ಕೃತ ಸಂಶೋಧನೆಗಳ ಆಧಾರದ ಮೇಲೆ ವಿನ್ಯಾಸಗೊಳಿಸಲಾದ ಈ 'ಫ್ರೀಡಂ ಡಯಟ್' ನಿಂದ ನಿಮ್ಮ ಸಕ್ಕರೆ ಖಾಯಿಲೆಯಿಂದ ಕೇವಲ ೬ ದಿನಗಳಲ್ಲಿ ಅದ್ಭುತ ಲಾಭ ಪಡೆಯಿರಿ!
ಕೇವಲ 21 ದಿನಗಳಲ್ಲಿ ಔಷಧಿಗಳನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಿಟ್ಟು ಬಿಡಿ!
ಯಾವುದೇ ಔಷಧಿ, ಕಠಿಣ ಡಯಟ್, ವ್ಯಾಯಾಮ ಅಥವ ಅಡ್ಡ ಪರಿಣಾಮಗಳಿಲ್ಲ!
ಡಯಾಬಿಟಿಸ್ ನಿಂದ ಮುಕ್ತಿ ಹೊಂದಲು ಮೂರು ಆಯ್ಕೆಗಳು
1. ಸರಳ ಭಾಷೆಯಲ್ಲಿರುವ ನಮ್ಮ ಫ್ರೀ ಡಯಟ್ ಪ್ಲಾನ್ ಅನ್ನು ಉಚಿತವಾಗಿ ಪಡೆದು ನೀವೇ ಪ್ರಯತ್ನಿಸಿ.
2. ದೀರ್ಘ ಕಾಲದಿಂದ ಔಷಧಿಯ ನೆರವಿನಲ್ಲಿರುವರು ತಜ್ಞರ ನಿಗಾದಲ್ಲಿ ಪ್ರಯತ್ನಿಸಿ.
3. ಮನೆಯ ವಾತಾವರಣದಲ್ಲಿ ಪ್ರಯತ್ನಿಸಲು ಪ್ರೇರಣೆ ಸಿಗುತ್ತಿಲ್ಲವೆಂದಾದರೆ ನಮ್ಮ 21 ದಿನಗಳ 'ಫ್ರೀಡಂ ಡಯಟ್ ರಿಟ್ರೀಟ್',
ಪ್ರಕೃತಿಯ ನಡುವೆ ವಸತಿ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳಿ.
ಸಾವಿರಾರು ಜನರು ಈಗಾಗಲೇ 'ಫ್ರೀಡಂ ಡಯಟ್' ನೆರವಿನಿಂದ ಲಾಭ ಪಡೆದಿದ್ದಾರೆ.
ತಡವೇಕೆ?
ಈಗಲೇ ಕಾರ್ಯಮಗ್ನರಾಗಿ.
ಫ್ರೀಡಂ ಡಯಟ್ ಪ್ಲಾನ್ ಗಾಗಿ +91 94821 40916 ಸಂಖ್ಯೆಗೆವಾಟ್ಸಪ್ಪ್ ಮೆಸೇಜ್ ಮಾಡಿ.
https://menuzen.site/Swasthya.Way2Health
.Way2Health
24/10/2022
ಮಧುಮೇಹವನ್ನು ಗುಣಪಡಿಸಲು ಸಾಧ್ಯವಿಲ್ಲ ಎಂಬುದು ಈಗ ಹಳೆಯ ಪುರಾಣ!
ಯಾವುದೇ ಔಷಧಿಗಳಿಲ್ಲದೆ, ಕಟ್ಟುನಿಟ್ಟಾದ ಆಹಾರ ಪದ್ಧತಿ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನಿಮ್ಮ ಟೈಪ್-2 ಡಯಾಬಿಟಿಸ್ ಅನ್ನು ನಮ್ಮ 'ಫ್ರೀಡಮ್ ಡಯಟ್' ಪ್ಲಾನ್ ನಿಂದ ನೈಸರ್ಗಿಕವಾಗಿ-ಸುರಕ್ಷಿತವಾಗಿ ಕೇವಲ 6 ದಿನಗಳಲ್ಲಿ ರಿವರ್ಸ್ ಮಾಡಿಕೊಳ್ಳಿ!
ವೈಜ್ಞಾನಿಕ ಸಂಶೋಧನೆ ಮತ್ತು ಕೇಸ್ ಸ್ಟಡೀಸ್‌ನಿಂದ ಆಧಾರದಿಂದ ಕೂಡಿದೆ.
9482140916 ಗೆ 'ಫ್ರೀಡಮ್ ಡಯಟ್ ಪ್ಲಾನ್' ಸಂದೇಶವನ್ನು ಕಳುಹಿಸುವ ಮೂಲಕ ಮಾರ್ಗದರ್ಶಿ ಪಡೆಯಿರಿ.
Click here to claim your Sponsored Listing.
Category
Contact the business
Address
Bangalore
560079