Pavan Kumar MP
04/07/2026
"ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ, ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು – ಇದೇ ಧರ್ಮದ ಸರ್ವಸ್ವ" ಎಂಬ ಧರ್ಮ ಸಂದೇಶ ಸಾರಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆಯಂದು ಗೌರವ ಪೂರ್ವಕ ನಮನಗಳು.
Tributes to the great saint Swami Vivekananda on his death anniversary, who preached the religious message, "The secret of religion lies not in the doctrines, but in its implementation. Being good, doing good - this is the essence of religion."
01/07/2026
ತಮ್ಮ ಜೀವವನ್ನು ಪಣಕ್ಕಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡಿ, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಮಸ್ತ ವೈದ್ಯ ಸಮೂಹಕ್ಕೆ 'ರಾಷ್ಟ್ರೀಯ ವೈದ್ಯರ ದಿನ'ದ ಶುಭಾಶಯಗಳು. ನಿಮ್ಮ ಈ ಸಮರ್ಪಣಾ ಮನೋಭಾವಕ್ಕೆ ಕೋಟಿ ಕೋಟಿ ನಮನಗಳು.
Happy 'National Doctors' Day' to all the doctors who are risking their lives to treat patients and provide selfless service to society. Millions of salutes for your dedication.
30/06/2026
ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಪಣ ತೊಟ್ಟಿರುವ ಕಾಂಗ್ರೆಸ್ ಸರ್ಕಾರ, ಉತ್ತರ-ದಕ್ಷಿಣದ 16.7 ಕಿ. ಮೀ. ಸುರಂಗ ರಸ್ತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಇದರ ಜೊತೆಗೆ 150 ಕಿ.ಮೀ. ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದ್ದು, 75 ಕಿ.ಮೀ ಗೆ ಮೊದಲ ಹಂತದಲ್ಲಿ ಟೆಂಡರ್ ಕರೆಯಲಾಗುವುದು.
The Congress Government, which is committed to the development of Bengaluru's infrastructure, has completed the tender process for the 16.7 km North-South Tunnel Road. In addition, it is planning to build a 150 km elevated corridor, and tenders will be called for 75 km in the first phase.
28/06/2026
"ಎರಡು ಹನಿಗಳು ಪೋಲಿಯೋ ವಿರುದ್ಧ ನಿರಂತರ ಗೆಲುವು'
ಪಲ್ಸ್ ಪೋಲಿಯೋ ಅಭಿಯಾನ
ಇಂದಿನಿಂದ ಜುಲೈ 01, 2026 ರವರೆಗೆ ಪೋಷಕರು ತಪ್ಪದೇ ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಿ.ಪೋಲಿಯೋ ಮುಕ್ತ ಸಮಾಜಕ್ಕೆ ಕೈಜೋಡಿಸೋಣ.
26/06/2026
ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಜಂಟಿ ಸಹಯೋಗದೊಂದಿಗೆ ತುಂಗಭದ್ರಾ ಜಲಾಶಯಕ್ಕೆ ನೂತನವಾಗಿ ಅಳವಡಿಸಲಾದ 33 ಸ್ಪಿಲ್‌ವೇ ಗೇಟುಗಳನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರು ಲೋಕಾರ್ಪಣೆ ಮಾಡಿದ ಸಂದರ್ಭ.
ಈ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ್ ರವರು, ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಎನ್. ಚಂದ್ರಬಾಬು ನಾಯ್ಡುರವರು ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳಾದ ಶ್ರೀ ಎ. ರೇವಂತ್ ರೆಡ್ಡಿ ಅವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದರು.
Hon'ble Chief Minister Shri D.K. Shivakumar inaugurated the 33 newly installed spillway gates of Tungabhadra reservoir in collaboration with the Water Resources Department and Tungabhadra Board.
Union Minister for Jal Shakti Shri C. R. Patil, Chief Minister of Andhra Pradesh Shri N. Chandrababu Naidu and Chief Minister of Telangana Shri A. Revanth Reddy, MPs, MLAs, Legislative Council members and many other dignitaries were present on the occasion.
Click here to claim your Sponsored Listing.
Category
Contact the organization
Telephone
Website
Address
Bharath Housing Society, Chikkallsandra
Bangalore
560061